Gazaದಲ್ಲಿ Israel ಹಮಾಸ ನಡುವಿನ ಸಂಘರ್ಷ ತಾರಕ್ಕೇರಿದೆ. ಅಲ್ಲಿನ ಬಂಕರ್ಗಳಲ್ಲಿ, ಟನಲ್ಗಳಲ್ಲಿ ಅವಿತು ಕುಳಿತಿರೋ ಹಮಾಸ್ ಉಗ್ರರನ್ನ ಹೊಡದು ಹಾಕುವ ನಿಟ್ಟಿನಲ್ಲಿ ಇಸ್ರೇಲಿ ಪಡೆಗಳು ನಿರ್ದಿಷ್ಟ ಜಾಗಗಳನ್ನ ಸುತ್ತುವರೆದಿವೆ.ಈ ಹಿನ್ನಲೆಯಲ್ಲಿ ಅಲ್ ಶೀಫಾ, ಅಲ್ ಖುರ್ದ್, ರನ್ತಿಸಿ ಯಂತಹ ಪ್ರಮುಖ ಆಸ್ಪತ್ರೆಗಳ ಕೆಳಗೂ ಕೂಡಾ ಹಮಾಸ್ ಉಗ್ರರು ಬಂಕರ್ಗಳನ್ನ, ಟನಲ್ಗಳನ್ನ ನಿರ್ಮಿಸಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ಇಸ್ರೇಲ್ ಡಿಫೆನ್ಸ್ ಪೋರ್ಸ್ ತಿಳಿಸ್ತಿದೆ.
ಒಂದು ಕಡೆ,Israel ಅಲ್ಲಿ ಮಾಡ್ತಿರೋ ದಾಳಿ ಅಮಾನವೀಯ ಅಲ್ಲಿ ಜನ ಸಾಮಾನ್ಯರ ಮೇಲೆ ದಾಳಿಗಳಾಗ್ತಾ ಇವೆ ಅಂತಾ ಒಂದಷ್ಟು ಸುದ್ದಿವಾಹಿನಿಗಳೂ ಕತಾರ್ ಮೂಲದ ಅಲ್ ಜಜೀರಾ ದಂಥಾ ಮಾಧ್ಯಮಗಳು ವರದಿ ಮಾಡ್ತಿರೋ ಹೊತ್ತಲ್ಲಿ, ಪ್ಯಾಲಸ್ತೀನಿಯರ ಮೇಲಿನ ದಾಳಿಗಳಿಗೆ ಸಂಬಂಧ ಪಟ್ಟ ವಿಡಿಯೋಗಳು ಹೊರ ಬರ್ತಿರೋ ಹೊತ್ತಲ್ಲಿ, ಹಮಾಸ್ ಉಗ್ರರು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ವಿಕ್ಟಿಂ ಕಾರ್ಡ್ ಪ್ಲೇ ಮಾಡ್ತಿದಾರೆ ಅಂತಾ ಆರೋಪ ಮಾಡ್ತಿರೋ ಇಸ್ರೇಲಿನ ಡಿಫೆನ್ಸ್ ಫೋರ್ಸ್, ಗಾಜಾದ ನೈಜ ಚಿತ್ರಣವನ್ನ ಜಗತ್ತಿನ ಮುಂದಿಡೋ ನಿಟ್ಟಲ್ಲಿ ಒಂದಷ್ಟು ವಿಡಿಯೋಗಳನ್ನ ಬಿಡುಗಡೆ ಮಾಡಿದೆ.
ಇತ್ತೀಚೆಗೂ ಕೂಡಾ ಹಮಾಸ್ ಉಗ್ರರ ಮಾಸ್ಟರ್ ಮೈಂಡ್ ಒಬ್ಬನ ಮನೆ ಮೇಲೆ ದಾಳಿ ಮಾಡಿರೋ ಇಸ್ರೇಲಿ ಪಡೆಗಳು, ಅವನ ಮನೆ ಇರುವ ಜಾಗದ ವಿಡಿಯೋ ಚಿತ್ರಿಕರಣ ಮಾಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮನೆ, ಅದು ಇರೋ ಜಾಗ, ಆ ಮನೆಯಿಂದ ಸ್ಕೂಲ್ ಮತ್ತು ಆಸ್ಪತ್ರೆಗಳಿಗೆ ಇರುವ ದೂರ, ಆಸ್ಪತ್ರೆಗಳ ಕಟ್ಟಡಗಳ ಕೆಳಗೆ ಇರುವ ಟನಲ್ಗಳು, ಅದರಲ್ಲಿನ ವ್ಯವಸ್ಥೆ ಹಾಗೂ ಅಲ್ಲಿ ಇಡಲಾಗಿರೋ ಆಯುಧಗಳ ಬಗ್ಗೆ ಆ ವಿಡಿಯೋದಲ್ಲಿ ಮಾಹಿತಿ ಕೊಡಲಾಗ್ತಾ ಇದೆ.
ಈ ಮನೆ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ರೂವಾರಿಯೊಬ್ಬನ ಮನೆ ಅಂತಾ ಹೇಳಲಾಗ್ತಾ ಇದೆ. ಇಲ್ಲಿವರೆಗೂ ಇಸ್ರೆಲ್ ಗಾಜಾದ ಮೇಲೆ ನಡೆಸಿರೋ ದಾಳಿಯಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅದೇ ರೀತಿ ಅಕ್ಟೋಬರ್
7ರಂದು ಹಮಾಸ್ ಉಗ್ರು ನಡೆಸಿದ ದಾಳಿಯಲ್ಲಿ 1400 ಮಂದಿ ಬಲಿಯಾಗಿದ್ದಾರೆ..ಇನ್ನೂರಕ್ಕು ಹೆಚ್ಚು ನಾಗರೀಕರನ್ನ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ.







Leave a Reply