ಅದೆಷ್ಟು ಭಯಾನಕವಾಗಿದೆ ಗೊತ್ತಾ ಹಮಾಸ್ ಟನಲ್..?

ಭೂಮಿಯ ಮೇಲೆ, ಆಕಾಶದ ಮೂಲಕ ನಡೀತಿದ್ದ ಗಾಜಾ ಪಟ್ಟಿಯ ಮೇಲಿನ Israel ದಾಳಿ ಈಗ ನೆಲದಾಳಕ್ಕೂ ಇಳೀತಾ ಇದೆ. Israel ಪಡೆಗಳು GAZA ದಲ್ಲಿನ ನೆಲದಾಳದ ಅಡಗು ತಾಣಗಳನ್ನ ಗುರಿಯಾಗಿಸಿಕೊಂಡು ದಾಳಿಯನ್ನ ತೀವ್ರ ಗೊಳಿಸ್ತಾ ಇವೆ.
ಈಗಾಗಲೇ ಗಾಜಾದ ಉತ್ತರ ಭಾಗವನ್ನ ಬಹುತೇಕ ತನ್ನ ನಿಯಂತ್ರಣಕ್ಕೆ ಪಡೆದಿರೋ ಇಸ್ರೇಲಿ ಪಡೆ ಹಮಾಸ್ನ ಭೂಗತ ಅಡಗುದಾಣಗಳನ್ನ ಕೂಡಾ ವಶಪಡಿಸಿಕೊಳ್ತಾ ಇದೆ.
ಹೀಗೆ ನಿಯಂತ್ರಣಕ್ಕೆ ಪಡೆದಿರೋ ಹಮಾಸ್ ನ ಒಂದೊಂದು ಟನಲ್ ಕೂಡಾ ಯಹೂದಿ ಪಡೆಯನ್ನೇ ಬೆಚ್ಚಿ ಬೀಳಿಸ್ತಿದೆ. ಅಬ್ಬಾ ಎಂಥಾ ಕುಶಲತೆ ಅನ್ನೋ ಹಾಗೆ ಮಾಡ್ತಿರೋ ಈ ಸುರಂಗಗಳಲ್ಲಿ ಗಾಳಿ ಬೆಳಕಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಹಮಾಸ್ ಉಗ್ರರು ಮಾಡಿಕೊಂಡಿದಾರೆ.
ಇಲ್ಲಿನ ಎಲ್ಲ ಸುರಂಗ ಮಾರ್ಗಗಳೂ ಒಂದಕ್ಕೊಂದು ಸಂಪರ್ಕವನ್ನ ಹೊಂದಿದ್ದು, ಸುಮಾರು ಮೂವತ್ತು ಮೀಟರ್ ಅಂದ್ರೆ ನೂರು ಅಡಿಗಳಷ್ಟು ಆಳಕ್ಕೆ ಭೂಮಿಯನ್ನ ಕೊರೆಯಲಾಗಿದ್ದು,ಸರಿಸುಮಾರು 500 ಕಿಲೋ ಮೀಟರ್ ಉದ್ದದ ವರೆಗೆ ಇವು ಸಂಪರ್ಕವನ್ನ ಹೊಂದಿವೆ ಅಂತಾ ಹೇಳಲಾಗ್ತಾ ಇದೆ.
ವಿಶೇಷ ಅಂದ್ರೆ ತುರ್ತು ಸಂದರ್ಭಗಳಲ್ಲಿ, ಆಯುಧಗಳು, ಆಹಾರ ನೀರು ಮುಂತಾದ ಎಲ್ಲವನ್ನೂ ದಾಸ್ತಾನು ಮಾಡಿಕೊಳ್ಳೋದಕ್ಕೆ ಬೇಕಾದ Store Room ಸಹ ಈ ಸುರಂಗದಲ್ಲಿದೆ.
ಮೇಲ್ನೋಟಕ್ಕೆ ಸಣ್ಣ ಗುಹೆಯಂತೆ ಕಾಣೋ ಈ ಭೂಗತ ಅಡಗುದಾಣದಲ್ಲಿ ಇಳಿದು ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಬಾಂಬ್ ಶೆಲ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಕಬ್ಬಿಣದ ಸಲಕರಣೆಗಳನ್ನು ಸಹ ಇರಿಸಲಾಗಿದೆ.
ಇನ್ನು ಅಚ್ಚರಿ ಅಂದ್ರೆ ಎಂಥಾ ದಾಳಿ ನಡೆದ್ರೂ ಸುಲಭವಾಗಿ ತಪ್ಪಿಸಿಕೊಳ್ಳಲು ಅನುವಾಗುವಂತೆ ಈ ಸುರಂಗವನ್ನು ನಿರ್ಮಿಸಲಾಗಿದೆ. ಸದ್ಯಕ್ಕೆ ಇಂಥಾ ಒಂದಷ್ಟು ಅಡಗುದಾಣಗಳು ಇಸ್ರೇಲ್ ಪಡೆಗಳ ನಿಯಂತ್ರಣದಲ್ಲಿವೆ.
ಈ ಟನಲ್ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ವಿಶ್ವದ ಅದ್ಭುತಗಳೆಂದು ಇವುಗಳನ್ನು ವಿಶ್ವಸಂಸ್ಥೆ ಪರಿಗಣಿಸಲಿ, ಹಾಗೂ ಇಸ್ರೇಲ್ ಇವುಗಳನ್ನು ನಾಶಪಡಿಸದಿರಲಿ ಅನ್ನೋ ಲಘು ಹಾಸ್ಯದ ಒತ್ತಾಯ ಕೇಳಿಬಂದಿದೆ.