ಆಸ್ಪತ್ರೆಗಳು, ಮಸೀದಿಗಳಲ್ಲಿ ಹಮಾಸ್ ಸೇನಾ ನೆಲೆ..! ವಿಡಿಯೋ ಬಹಿರಂಗ ಪಡಿಸಿದ ಇಸ್ರೇಲ್

ISREAL ಹಮಾಸ್ ಸಂಘರ್ಷ ಶುರುವಾಗಿ 1 ತಿಂಗಳು ಕಳೆದು ಹೋಗ್ತಿದೆ. ಆದ್ರೆ, ಸಂಘರ್ಷದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ.. ಗಾಜಾ ಪಟ್ಟಿಯ ಉತ್ತರ ಭಾಗವನ್ನ ಸಂಪೂರ್ಣವಾಗಿ ಸುತ್ತು ವರೆದಿರೋ ಇಸ್ರೇಲಿ ಪಡೆಗಳು, ಅಲ್ಲಿನ ಜನರನ್ನ ದಕ್ಷಿಣಕ್ಕೆ ಹೋಗೋದಕ್ಕೆ ಮತ್ತೆ ಮನವಿ ಮಾಡಿಕೊಂಡಿವೆ. ಅಷ್ಟ ಅಲ್ಲಾ, ಉತ್ತರ ಗಾಜಾದ ಹಮಾಸ್ ನೆಲೆಗಳನ್ನ ಗುರಿಯಾಗಿಸಿಕೊಂಡು ಮಾಡೋ ದಾಳಿಗಳಲ್ಲಿ ಸಾಮಾನ್ಯ ಜನಕ್ಕೆ ತೊಂದರೆಯಾಗೋದು ಬೇಡ ಅ್ನನೋ ಕಾರಣಕ್ಕೆ, ಅಲ್ಲಿನ ಜನಕ್ಕೆ ಅಲ್ಲಿಂದಾ ದಕ್ಷಿಣ ಗಾಜಾಗೆ ಹೋಗೋದಕ್ಕೆ ತಿಳಿಸಿರುವ ಇಸ್ರೇಲ್ ದಕ್ಷಿಣ ಗಾಜಾಗೆ ಮಾನವೀಯ ನೆರವು ಸಿಗೋದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿದೆ. ಜೊತೆಗೆ, ಜನಾ ಅಲ್ಲಿಗೆ ಹೋಗೋದಕ್ಕೆ ಸೇಫ್ ಪ್ಯಾಸೇಜನ್ನ ಕೂಡಾ ಒದಗಿಸಿಕೊಡ್ತಾ ಇದೆ..
ಈ ಬಗ್ಗೆ ವಿಡಿಯೋ ಒಂದನ್ನ ಇಸ್ರೇಲಿನ ಡಿಫೆನ್ಸ್ ಫೋರ್ಸ್ ರೀ ಟ್ವೀಟ್ ಮಾಡಿದ್ದು, ಉತ್ತರ ಗಾಜಾದಿಂದಾ ಸಾವಿರಾರು ಜನಾ ದಕ್ಷಿಣದತ್ತ ವಲಸೆ ಹೋಗ್ತಿರೋ ದೃಶ್ಯಗಳು ಅದರಲ್ಲಿವೆ.

ಇನ್ನು, ಇಲ್ಲಿ ಈಗಾಗಲೇ ಇಸ್ರೇಲಿ ಪಡೆಗಳು ಸಂಪೂರ್ಣವಾಗಿ ಗಾಜಾನ ಸುತ್ತುವರೆದಿವೆ. ಇಲ್ಲಿ ಉತ್ತರ ಗಾಜಾದಿಂದಾ ಜನಾ ದಕ್ಷಿಣಕ್ಕೆ ಹೋದ ಕೂಡಲೇ, ಉತ್ತರ ಗಾಜಾದ ಹಮಾಸ್ ನೆಲೆಗಳನ್ನ ಧ್ವಂಸ ಮಾಡೋ ಕಾರ್ಯಾಚರಣೆ ಆರಂಭವಾಗಲಿದೆ ಅಂತ ಇಸ್ಋಏಲಿ ಸೇನೆ ತಿಳಿಸಿದೆ.
ಈಗಾಗಲೇ ಇಸ್ರೇಲಿ ಪಡೆಗಳು, ಉತ್ತರ ಗಾಜಾದಲ್ಲಿನ ಒಂದಷ್ಟು ಟನಲ್ಲುಗಳನ್ನ ನಾಶ ಮಾಡಿವೆ. ಜೊತೆಗೆ ಹಮಾಸ್ ಪಡೆಗಳ ಆಯುಧಗಳು ಹಾಗೂ ಕಮ್ಯಾಂಡ್ ಸೆಂಟರುಗಳನ್ನ ಕೂಡಾ ಇಸ್ರೇಲಿ ಪಡೆಗಳೂ ಧ್ವಂಸ ಮಾಡಿವೆ.
ಇನ್ನು ಇಸ್ರೇಲ್ ಆಸ್ಪತ್ರೆಗಳ ಮೇಲೆ ನಿರಾಶ್ರಿತ ಶಿಬಿರಗಳ ಮೇಲೆ ಜನವಸತಿಗಳ ಮೇಲೆ ದಾಳಿ ಮಾಡ್ತಾ ಇದೆ ಅಂತಾ ಹಮಾಸ್ ಹಾಗೂ ಒಂದಷ್ಟು ಇಸ್ಲಾಮಿಕ್ ದೇಶಗಳು ಆರೋಪ ಮಾಡ್ತಿರೋವಾಗಲೇ, ಇಸ್ರೇಲ್ ಡಿಫೆನ್ಸ್ ಫೋರ್ಸ್ ಒಂದು ವಿಡಿಯೋನ ರಿಲೀಸ್ ಮಾಡಿದೆ. ಅದರಲ್ಲಿ ಹಮಾಸ್ ಪಡೆಗಳು ಆಸ್ಪತ್ರೆಗಳನ್ನ ಮಕ್ಕಳ ಆಟದ ಮೈದಾನಗಳನ್ನ ಹೇಗೆ ತಮ್ಮ ಆಯುಧಗಾರಗಳನ್ನಾಗಿ ಸೇನಾ ನೆಲೆಯನ್ನಾಗಿ ಮಾಡಿಕೊಳ್ತಾ ಇವೆ ಅನ್ನೊದಕ್ಕೆ ಸಾಕಷ್ಟಿಯನ್ನ ಒದಗಿಸಲಾಗಿದೆ.

ಗೆಳೆಯರೇ ಆ ವಚಿಡಿಯೋ ಲಿಂಕ್ ಕೆಳಗೆ ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಹಾಗೂ ಕಾಮೆಮಟ್ ಬಾಕ್ಸಲ್ಲಿ ಕೊಟ್ಟಿದೀನಿ ನೀವು ಅದನ್ನ ನೋಡಬಹುದು. ಅದರಲ್ಲಿ ಆಸ್ಪತ್ರೆಯೊಂದರಿಂದರಿಂದಾ ಟ್ಯಾಂಕ್ ಹೊರ ಬರ್ತಿರೋ ದೃಶ್ಯಗಳಿವೆ ಹಾಗೇ ಟನಲ್ಲುಗಳಿಗೆ ಕನೆಕ್ಟಿವಿಟಿ ಕಲ್ಪಿಸಲಾಗಿರೋ ಒಂದಷ್ಟು ದೃಶ್ಯಗಳು ನಮಗೆ ಕಾಣ ಸಿಗುತ್ವೆ. ಹಾಗೇ ಮಸೀದಿಗಳನ್ನ ಕೂಡಾ ಹಮಾಸ್ ಪಡೆಗಳು ಆಯುಧಾಗಾರಗಳಾಗಿ, ರಾಕೆಟ್ ಲಾಂಚಿಂಗ್ ಏರಿಯಾಗಳಾಗಿ ಬಳಕೆ ಮಾಡಿಕೊಳ್ತಾ ಇದೆ ಮತ್ತು ಅದಕ್ಕಾಗಿ ಸಾಕಷ್ಟು ತಯಾರಿಗಳನ್ನ ಅವರು ಮಾಡಿಕೊಂಡಿದ್ದು, ಮಸೀದಿಗಳ ಕಾಂಪೌಂಡ್ ಒಳಗೆ ನೆಲಮಾಳಿಗೆಗಳನ್ನ ಮಾಡಿಕೊಂಡಿದಾರೆ ಅನ್ನೋದನ್ನ ಕೂಡಾ Israel ಬಹಿರಂಗ ಮಾಡಿದೆ.

ಇನ್ನು, ಹಮಾಸ್ ಸಂಪೂರ್ಣವಾಗಿ ಸೋಲೋ ವರೆಗೆ ನಾವು ಈ ಯುದ್ದವನ್ನ ನಿಲ್ಲಿಸೋದಿಲ್ಲ ಅಂತಾ ಇಸ್ರೇಲ್ ಪ್ರಧಾನಿ ನೆತನ್ಯಾಹೂ ತಿಳಿಸಿದಾರೆ. ಕದನ ವಿರಾಮ ಅನ್ನೋ ಮಾತು ನಮ್ಮ ಕಿವಿಗೆ ಈಗ ಬೀಳೋದಕ್ಕೆ ಸಾಧ್ಯವೇ ಇಲ್ಲಾ ಅಂತಾ ಇಸ್ರೇಲ್ ಪ್ರಧಾನಿ ಹೇಳ್ತಿದ್ರೆ, ಟರ್ಕಿ, ಹಾಂಡರಸ್, ಚಿಲಿ, ಜೋರ್ಡಾನ್, ಚಾಡ್, ಕೊಲಂಬಿಯಾ ಬಹರೇನ್, ದಕ್ಷಿಣ ಆಫ್ರಿಕಾ ಹಾಗೂ ಬೊಲಿವಿಯಾ ದೇಶಗಳು ತಮ್ಮ ರಾಯ ಭಾರಿಗಳನ್ನ Israel ನಿಂದಾ ವಾಪಸು ಕರೆಸಿಕೊಂಡಿವೆ. ಮತ್ತು ಗಾಜಾ ಮೇಲಿನ ದಾಳಿಯನ್ನ ಇಸ್ಋಏಲ್ ತಕ್ಷಣ ನಿಲ್ಲಿಸಬೇಕು ಅಂತಾ ಒತ್ತಾಯ ಮಾಡಿವೆ.
ಇರಾನ್ ಕೂಡಾ ಗಾಜಾ ಮೇಲಿನ ದಾಳಿಯನ್ನ ನಿಲ್ಲಿಸೋದಕ್ಕೆ ಇಸ್ರೇಲ್ ಮೇಲೆ ನಿಮ್ಮ ಪ್ರಭಾವವನ್ನ ಬಳಸಿ ಅಂತಾ ಭಾರತಕ್ಕೆ ಮನವಿ ಮಾಡಿಕೊಂಡಿದೆ.