ISREAL ಹಮಾಸ್ ಸಂಘರ್ಷ ಶುರುವಾಗಿ 1 ತಿಂಗಳು ಕಳೆದು ಹೋಗ್ತಿದೆ. ಆದ್ರೆ, ಸಂಘರ್ಷದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ.. ಗಾಜಾ ಪಟ್ಟಿಯ ಉತ್ತರ ಭಾಗವನ್ನ ಸಂಪೂರ್ಣವಾಗಿ ಸುತ್ತು ವರೆದಿರೋ ಇಸ್ರೇಲಿ ಪಡೆಗಳು, ಅಲ್ಲಿನ ಜನರನ್ನ ದಕ್ಷಿಣಕ್ಕೆ ಹೋಗೋದಕ್ಕೆ ಮತ್ತೆ ಮನವಿ ಮಾಡಿಕೊಂಡಿವೆ. ಅಷ್ಟ ಅಲ್ಲಾ, ಉತ್ತರ ಗಾಜಾದ ಹಮಾಸ್ ನೆಲೆಗಳನ್ನ ಗುರಿಯಾಗಿಸಿಕೊಂಡು ಮಾಡೋ ದಾಳಿಗಳಲ್ಲಿ ಸಾಮಾನ್ಯ ಜನಕ್ಕೆ ತೊಂದರೆಯಾಗೋದು ಬೇಡ ಅ್ನನೋ ಕಾರಣಕ್ಕೆ, ಅಲ್ಲಿನ ಜನಕ್ಕೆ ಅಲ್ಲಿಂದಾ ದಕ್ಷಿಣ ಗಾಜಾಗೆ ಹೋಗೋದಕ್ಕೆ ತಿಳಿಸಿರುವ ಇಸ್ರೇಲ್ ದಕ್ಷಿಣ ಗಾಜಾಗೆ ಮಾನವೀಯ ನೆರವು ಸಿಗೋದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ...

ಇಸ್ರೆಲ್ – ಹಮಾಸ್ ಸಂಘರ್ಷ ದಿನೇ ದಿನೇ ತಾರಕ್ಕೆ ಹೋಗ್ತಾ ಇದೆ.. ಇದು ವರೆಗೆ ಸುಮಾರು 5,700ಕ್ಕೂ ಹೆಚ್ಚು ಪ್ಯಾಲಸ್ತೀನಿಯರು ಸಾವಿಗೀಡಾಗಿರೋ ಮಾಹಿತಿ ಬರ್ತಿದ್ದು, ಇಡೀ ಗಾಜಾ ಪಟ್ಟಿ ಸ್ಮಶಾನದಂತೆ ತಯಾರಾಗಿದೆ. ಈ ಮಧ್ಯೆ, ಅಲ್ಲಿ ಇಸ್ರೇಲ್ ನಡೆಸ್ತಾ ಇರೋ ದಾಳಿಗಳಿಂದಾ “ಸಾಮಾನ್ಯ ಪ್ಯಾಲಸ್ತೀನಿಯರು ತೀವ್ರ ಸಂಕಷ್ಟಕ್ಕೆ ತುತ್ತಾಗ್ತಾ ಇದಾರೆ” ಅಂತಾ ವಿಶ್ವ ಸಮುದಾಯ ಆತಂಕ ವ್ಯಕ್ತ ಪಡಿಸ್ತಾ ಇದೆ. ಮತ್ತೊಂದು ಕಡೆ, ಆ ಸಾಮಾನ್ಯ ಪ್ಯಾಲಸ್ತೀನಿ ಸಾರ್ವಜನಿಕರೇ ಅಕ್ಟೋಬರ್ 7ನೇ ತಾರೀಖು ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಮತ್ತು ಅವರು ಇಲ್ಲಿ ಏನೆಲ್ಲಾ ...