ತಾರಕಕ್ಕೇರಿದ ಇಸ್ರೆಲ್‌-ಹಮಾಸ್‌ ಸಂಘರ್ಷ..!

ಗಾಜ ಪಟ್ಟಿಯಲ್ಲಿ ಇಸ್ರೆಲ್-ಹಮಾಸ್ ಸಂಘರ್ಷ ತಾರಕ್ಕೇರಿದೆ. ಇಷ್ಟು ದಿನ ಇಸ್ರೆಲ್ ತನ್ನೊಡಲಲ್ಲಿ ಇಟ್ಟುಕೊಂಡಿದ್ದ ಸಿಟ್ಟನ್ನ ಈಗ ಹೊರ ಹಾಕ್ತಿದೆ. ಇತ್ತೀಚೆಗಷ್ಟೇ ಅ.7ರಂದು ಹಮಾಸ್ ಉಗ್ರರು ನಡೆಸಿದ್ದ ಪೈಶಾಚಿಕ ಕೃತ್ಯದ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಜಾಗತಿಕ ಮಹಿಳಾ ಸಂಘಟನೆಗಳನ್ನ ಇಸ್ರೆಲ್ ಪ್ರಧಾನಿ ನೆತನ್ಯಾಹು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದು ಕಡೆ ಇಸ್ರೆಲ್ನ ಪಡೆಗಳು ಗಾಜ ಪಟ್ಟಿಯಲ್ಲಿ ದಾಳಿಯನ್ನ ತೀವ್ರ ಗೊಳಿಸಿವೆ.
ಖಾನ್ ಯೂನಿಸ್ ನಗರದಲ್ಲಿ ಅಡಗಿರುವ ಹಮಾಸ್ ಉಗ್ರ ಬೇಟೆಗೆ ಇಳಿದಿರುವ ಇಸ್ರೆಲಿ ಪಡೆಗಳು, ಹಮಾಸ್ನಿಂದ ಪ್ರತಿರೋಧವನ್ನ ಎದುರಿಸಿವೆ. ಈ ಸಂದರ್ಭದಲ್ಲಿ ಇಸ್ರೆಲ್ನ ಮೂವರು ಯೋಧರು ವೀರಮರಣವನ್ನಪ್ಪಿದ್ದು, ಹಮಾಸ್ ಉಗ್ರರು ಕೂಡಾ ಸಾವನ್ನಪ್ಪಿದ್ದಾರೆ. ಈಗಾಗಲೇ ದಕ್ಷಿಣ ಗಾಜಾದಲ್ಲಿ ಎಲ್ಲಿ, ಯಾವಾಗ ದಾಳಿ ಮಾಡ್ಬೇಕು ಅನ್ನೋದ್ರ ನೀಲನಕ್ಷೆಯನ್ನ ಸಿದ್ಧ ಪಡಿಸಿಕೊಂಡಿರೋ ಇಸ್ರೆಲ್ ಆ ಪ್ರಕಾರವೇ ದಾಳಿ ಮಾಡ್ತಿದೆ. ಉತ್ತರ ಗಾಜಾಕ್ಕೆ ಕಂಪೇರ್ ಮಾಡಿಕೊಂಡ್ರೆ, ದಕ್ಷಿಣ ಗಾಜದಲ್ಲಿ ಜನ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿನೇ ಅಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚಾಗಬಹುದು ಅಂತ ಹೇಳಲಾಗ್ತಿರೋದು.ಇನ್ನು ಇಸ್ರೆಲ್ನ ಈ ಅಗ್ರೆಶನ್ಗೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ತೀವ್ರ ವಿರೋಧವನ್ನ ವ್ಯಕ್ತ ಪಡಿಸಿದ್ದಾರೆ.