ವಿವೋ ಕಂಪೆನಿ ವಿರುದ್ಧ ಇಡಿ ಚಾರ್ಜ್‌ಶೀಟ್‌

ಚೈನಾದ ಮೊಬೈಲ್ ಫೋನ್ ಕಂಪನಿ ವಿವೋ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ಚಾರ್ಜ್ ಶೀಟ್ ಸಲ್ಲಿಸಿದೆ. 2014ರಿಂದ 2021 ವರೆಗೂ ವಿವೋ ಕಂಪನಿ ಭಾರತದಿಂದ ಹೊರಕ್ಕೆ ಸರಿಮಾರು ಒಂದು ಲಕ್ಷ ಕೋಟಿ ರೂಪಾಯಿಯರೆಗೂ ಹಣವನ್ನ ಕಳುಹಿಸಿದೆ..ಬೇರೆ ಬೇರೆ ಕಂಪನಿಗಳ ಹೆಸ್ರಿಗೆ ಈ ಹಣವನ್ನ ಸಂದಾಯ ಮಾಡಿರೋ ವಿವೋ ಕಂಪನಿಗೆ, ಲಾವ ಇಂಟರ್ನ್ಯಾಷನಲ್ನ ಸಂಸ್ಥಾಪಕ ಹರಿ ಓಂ ರೈ ಸಹಾಯ ಮಾಡಿರೋದನ್ನು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇದ್ರ ಜೊತೆಗೆ ವಿವೋ ಕಂಪನಿಯ ಜೊತೆ ಕೆಲಸ ಮಾಡಿದ್ದ ಚಾರ್ಟೆಡ್ ಅಕೌಂಟೆಂಟ್ ನಿತಿನ್ ಗರ್ಗ್, ಆಡಿಟರ್ ರಂಜನ್ ಮಲಿಕ್, ಸೇರಿದಂತೆ ಸಾಕಷ್ಟು ಜನ್ರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನ ಪ್ರಿವೆಂಷನ್ ಆಫ್ ಮನಿಲ್ಯಾಂಡರಿಂಗ್ ಆಕ್ಟ್ನ ಅಡಿಯಲ್ಲಿ ಇಡಿ ದಾಖಲಿಸಿತ್ತು.