ಅತೀಕ್‌ ಅಹ್ಮದ್‌ ಖಲ್ಲಾಸ್‌

ಉತ್ತರ ಪ್ರದೇಶದ ಮಾಜಿ ಶಾಸಕ, ಮಾಜಿ ಸಂಸದ, ಭೂಗತ ಪಾತಕಿ ಅತೀಕ್ ಅಹ್ಮದ್ ಹಾಗೂ ಅವನ ಸಹೋದರ ಆಶ್ರಫ್ ಅಹ್ಮದ್ ನನ್ನು, ಅಪರಿಚಿತ ವ್ಯಕ್ತಿಗಳು ಸಾರ್ವಜನಿಕವಾಗಿ ಮಾಧ್ಯಮಗಳು ಹಾಗೂ ಪೊಲೀಸರ ಮುಂದೆಯೇ ಗುಂಡಿಟ್ಟು ಕೊಂದಿದ್ದಾರೆ. ಆರೋಗ್ಯ ತಪಾಸಣೆಗಾಗಿ ಅತೀಕ್ ಹಾಗೂ ಆತನ ಸಹೋದರ ಆಶ್ರಫ್ ರನ್ನ ಪೊಲೀಸರು ಪ್ರಯಾಗ್ ರಾಜ್ನ ಆಸ್ಪತ್ರೆಯೊಂದಕ್ಕೆ ಕರೆತಂದಿದ್ರು. ಈ ಸಂದರ್ಭ ಪತ್ರಕರ್ತರ ಜತೆ ಮಾತಾಡ್ತಾ ಇದ್ದ ಅತೀಕ್ ಹಾಗೂ ಆಶ್ರಫ್ನ ಮೇಲೆ, ಪತ್ರಕರ್ತರ ವೇಷದಲ್ಲಿ ಆ ಗುಂಪಿನಲ್ಲಿ ಸೇರಿಕೊಂಡಿದ್ದ ಹಂತಕರು, ನೋಡ್ನೋಡ್ತಾ ಇದ್ದ ಹಾಗೆ ತಲೆಗೆ ಗುಂಡಿಟ್ಟು ಕೊಂದಿದ್ದಾರೆ. ಅರುಣ್, ಸನ್ನಿ, ಲವಲೇಶ್ ಅನ್ನೋ ಹಂತಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಕೊಲೆಗೀಡಾದ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ರ ಮೇಲೆ ಉಮೇಶ್ ಪಾಲ್ ಹತ್ಯೆ ಸೇರಿದ ಹಾಗೇ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ವು.