ಮಹಾರಾಷ್ಟ್ರದಲ್ಲಿ ಮಳೆರಾಯನ ಅಬ್ಬರ..! ರಾಯಗಡದಲ್ಲಿ ಭೂ ಕುಸಿತದಿಂದ 22 ಸಾವು

ಮಹಾರಾಷ್ಟ್ರ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸ್ತಿದ್ದಾನೆ.ಕೃಷ್ಣ ಕಣಿವೆ, ಮುಂಬೈ, ಹಾಗೂ ಪಶ್ಚಿಮ ಘಟ್ಟಗಳ ಸಾಲಲ್ಲಿ ಹೆಚ್ಚಿನ ಮಳೆ ಆಗ್ತಿದೆ.ಪಶ್ಚಿಮ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದೆ.ಈ ಭೂ ಕುಸಿತದಲ್ಲಿ ಗುರುವಾರ 16 ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿತ್ತು.ಆದ್ರೆ ಶುಕ್ರವಾರ ಇನ್ನು 6 ಮಂದಿಯ ಮೃತದೇಹ ಸಿಕ್ಕಿರೋದ್ರಿಂದ ಸಾವಿನ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.ಅಲ್ಲದೇ ಇನ್ನು 86 ಮಂದಿ ಕಣ್ಮರೆಯಾಗಿದ್ದಾರೆ ಅಂತ ಹೇಳಲಾಗ್ತಿದ್ದು ಕಾಣೆಯಾದವರಿಗಾಗಿ ಹುಡುಕಾಟ ನಡೀತಿದೆ.ಎನ್​ಡಿಆರ್​ಎಫ್​ನ ತಂಡಗಳು, ರಾಯಗಡದ ಇರ್ಷಲ್ವಾಡಿ ಬಳಿಯಲ್ಲಿ ತಲಾಶ್ ನಡೆಸ್ತಿದ್ದಾವೆ.ಈ ಪ್ರದೇಶದಲ್ಲಿ ಹಾಡಿಗಳಿದ್ದು, ಅಲ್ಲಿನ ಜನ ಭೂಕುಸಿತದಿಂದ ಸಮಸ್ಯೆಯನ್ನ ಎದುರಿಸ್ತಿದ್ದಾರೆ.ಇಲ್ಲಿನ 48 ಮನೆಗಳಲ್ಲಿ ಹದಿನೇಳು ಮನೆಗಳು ಸಂಫೂರ್ಣವಾಗಿ ನಾಶ ಆಗಿದ್ದು, ಕಾಣೆಯಾಗಿರುವವರು ಜೀವಂತವಾಗಿ ಬರಲಿ ಅಂತ ಜನ ಪ್ರಾರ್ಥಿಸ್ತಿದ್ದಾರೆ.

ಕಳೆದ ಎರಡು ಮೂರು ದಿನದಿಂದ ಮಹಾರಾಷ್ಟ್ರದಾದ್ಯಂತ ಮಳೆ ಹೆಚ್ಚಾಗಿದ್ದು ಕೃಷ್ಣ ನದಿ ಪಾತ್ರದಲ್ಲಿ ಕೂಡಾ ಎಚ್ಚರಿಕೆಯನ್ನ ರವಾನಿಸಲಾಗಿದೆ.ಈಗಾಗಲೇ ಹಿಡಕಲ್ ಜಲಾಶಯಕ್ಕೆ ಎಂಬತ್ತಾರು ಸಾವಿರ ಕ್ಯೂಸೆಕ್​ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರ್ತಿದ್ದು, ಕೃಷ್ಣೆ ಮತ್ತೆ ಮೈ ದುಂಬಿದ್ದಾಳೆ.