ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಮತ್ತೊಮ್ಮೆ ಅಪಾಯದ ಮಟ್ಟವನ್ನ ಮೀರಿ ಹರೀತಿದೆ. ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಓಲ್ಡ್ ರೈಲ್ವೇ ಬ್ರಿಡ್ಜ್ ಬಳಿಯಲ್ಲಿ ಯಮುನಾ ನದಿ 205.33 ಮೀಟರ್ಗಳ ಮಾರ್ಕ್ನ ದಾಟಿದೆ.ಹೀಗಾಗಿ ಯಮುನ ನದಿಯ ದಡದಲ್ಲಿದ್ದ ನೂರಾರು ಜನ್ರನ್ನ ದೆಹಲಿ ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದೆ. ದೆಹಲಿಯ ಸಿಗ್ನೇಚರ್ ಬ್ರಿಡ್ಜ್ನ ಬಳಿಯಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಅವ್ರೆಲ್ಲರನ್ನು ರವಾನಿಸಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಯಮುನಾ ನದಿ ವಿಶ್ವ ಪ್ರಸಿದ್ದ ತಾಜ್ ಮಹಲಿನ ಕಾಪೌಂಡ್ ಗೋಡೆಗಳಿಗೆ ಮುಟ್ಟಿತ್ತು.ಅಲ್ಲದೇ ಜುಲೈ 13ನೇ ತಾರೀಕು ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದ ಯಮುನೆಯ ನೀರು 208.66 ಮೀಟರ್ನ ದಾಟಿತ್ತು.ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ್ ರಾಜ್ಯಗಳಲ್ಲಿ ಯಮುನಾ ನದಿ ಪಾತ್ರದಲ್ಲಿ ಭಾರಿ ಮಳೆ ಆಗ್ತಿರೋ ಕಾರಣದಿಂದ ಯಮುನೆಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗಿದೆ.





Leave a Reply