ಅಮೇರಿಕಾ ಸಂಯುಕ್ತ ಸಂಸ್ಥಾನ 2024ರ ಅಧ್ಯಕ್ಷೀಯ ಚುನಾವಣೆಗೆ ಭರ ಸಿದ್ಧತೆಯನ್ನ ನಡೆಸುತ್ತಾ ಇದೆ. ಇದೇ ಸಂದರ್ಭದಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ವಿವೇಕ್ ರಾಮಸ್ವಾಮಿಗೆ, ಪತ್ರಕರ್ತೆಯೊಬ್ಬರು ಧರ್ಮದ ಕುರಿತಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ವಿವೇಕ್ ರಾಮಸ್ವಾಮಿ, ಹುದ್ದೆಗೋಸ್ಕರ ಧರ್ಮವನ್ನ ಬದಲಿಸುವುದು ಅಥವಾ ಧರ್ಮದ ಕುರಿತಾಗಿ ಸುಳ್ಳು ಹೇಳುವುದು ಮಾಡಲಾರೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಪತ್ರಕರ್ತೆ, ಅಧಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ವಿವೇಕ್ ರಾಮಸ್ವಾಮಿ ಬಳಿ “ಒಬ್ಬ ಹಿಂದೂವನ್ನು ಅಮೇರಿಕನ್ನರು ತಮ್ಮ ಅಧ್ಯಕ್ಷರನ್ನಾಗಿ ಒಪ್ಪಿಕೊಳ್ತಾರಾ?” ಅನ್ನೋ ಪ್ರಶ್ನೆಯನ್ನ ಕೇಳಿದಾಗಿ ವಿವೇಕ್ ರಾಮಸ್ವಾಮಿ, ತನ್ನನ್ನ ತಾನು ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯೋದಿಲ್ಲ ಹಾಗೇ, ಗೆಲ್ಲೋದಿಕ್ಕಾಗಿ ಧರ್ಮದ ಕುರಿತಾಗಿ ಸುಳ್ಳು ಹೇಳೋಲ್ಲ ಎಂದರು. ಒಬ್ಬ ಹಿಂದು ಅಮೇರಿಕಾದ ಅಧ್ಯಕ್ಷನಾಗಬಾರದು ಅನ್ನೋ ನಿಯಮವಿದೆಯಾ ಎಂದು ಮರು ಪ್ರಶ್ನಿಸಿದಾಗ, ಪತ್ರಕರ್ತೆ ಬಳಿ ಉತ್ತರವಿರಲಿಲ್ಲ.
ತಮ್ಮ ಮಾತನ್ನು ಮುಂದುವರೆಸಿದ ವಿವೇಕ್ ರಾಮಸ್ವಾಮಿ ಹಿಂದೂ ಧರ್ಮದ ಮೌಲ್ಯಗಳ ಕುರಿತಾಗಿ ಹಾಗೂ ಹಿಂದೂ ಧರ್ಮ ಉಳಿದ ಧರ್ಮಗಳಿಗೆ ಹೇಗೆ ಪ್ರೇರಣೆಯಾಗಿದೆ ಎನ್ನುವ ಕುರಿತಾಗಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದರೊಂದಿಗೆ ಕ್ರೈಸ್ತ ಧರ್ಮವನ್ನು ಪಸರಿಸುವ ದೃಷ್ಟಿಯಿಂದ ನೋಡಿದರೆ ಅಮೇರಿಕ ಅಧ್ಯಕ್ಷನ ಸ್ಥಾನಕ್ಕೆ ತಾನು ಅತ್ಯುತ್ತಮ ಆಯ್ಕೆ ಅಲ್ಲದೇ ಹೋದರೂ, ತನ್ನನ್ನು ಆರಿಸಿದಲ್ಲಿ ಅಮೇರಿಕಾದ ಸಿದ್ಧಾಂತಗಳು ಹಾಗೂ ದೇಶಪ್ರೇಮವನ್ನ ಉಳಿಸಿಕೊಂಡು ಬೆಳೆಸುವ ನಿಟ್ಟಿನಲ್ಲಿ ತಾನು ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.
(Video courtesy:Twitter)







Leave a Reply