ಅಮೇರಿಕಾ ಸಂಯುಕ್ತ ಸಂಸ್ಥಾನ 2024ರ ಅಧ್ಯಕ್ಷೀಯ ಚುನಾವಣೆಗೆ ಭರ ಸಿದ್ಧತೆಯನ್ನ ನಡೆಸುತ್ತಾ ಇದೆ. ಇದೇ ಸಂದರ್ಭದಲ್ಲಿ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ವಿವೇಕ್ ರಾಮಸ್ವಾಮಿಗೆ, ಪತ್ರಕರ್ತೆಯೊಬ್ಬರು ಧರ್ಮದ ಕುರಿತಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ವಿವೇಕ್ ರಾಮಸ್ವಾಮಿ, ಹುದ್ದೆಗೋಸ್ಕರ ಧರ್ಮವನ್ನ ಬದಲಿಸುವುದು ಅಥವಾ ಧರ್ಮದ ಕುರಿತಾಗಿ ಸುಳ್ಳು ಹೇಳುವುದು ಮಾಡಲಾರೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ನಡೆದ ಸಂದರ್ಶನದಲ್ಲಿ ಪತ್ರಕರ್ತೆ, ಅಧಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿರುವ ವಿವೇಕ್ ರಾಮಸ್ವಾಮಿ ಬಳಿ “ಒಬ್ಬ ಹಿಂದೂವನ್ನು ಅಮೇರಿಕನ್ನರು ತಮ್ಮ ಅಧ್ಯಕ್ಷರನ್ನಾಗಿ ...



