ಸ್ನೇಹಿತರೇ.., ಪೂರ್ವ ಮತ್ತು ಪಶ್ಚಿಮಘಟ್ಟಗಳ ದಟ್ಟ ಅರಣ್ಯ, ಶೋಲಾ ಕಾಡುಗಳಂತಹ ನಿತ್ಯ ಹರಿದ್ವರ್ಣವನ್ನ ಹೊದ್ದುಕೊಂಡಿರೋ ನಮ್ಮ ಕರುನಾಡು ನಿಜಕ್ಕೂ ಹಲವು ವಿಸ್ಮಯಗಳ ಆಗರ. ಇಲ್ಲಿ ಇರೋ ಜೀವ ವೈವಿದ್ಯತೆಗಳು ಇಡೀ ವಿಶ್ವದ ಗಮನ ಸೆಳೆದಿವೆ. ಇಲ್ಲಿನ ಕಾಡುಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಅನೇಕ ಅಧ್ಯಯನಗಳು ಕೂಡ ನಡೆದಿವೆ. ಇಡೀ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಆನೆಗಳಿರೋ ಸ್ಥಳ ನಮ್ಮ ಕರ್ನಾಟಕ. ಇಂತಹ ಅದ್ಭುತಗಳನ್ನ ಹೊಂದಿರೋ ಆ ಘಟ್ಟಗಳ ವಿಶೇಷತೆಗಳು ಏನು ಅನ್ನೋದರ ಬಗ್ಗೆ ನಿಮಗೆ ಗೊತ್ತಾ..? ಪೂರ್ವ ಪಶ್ಚಿಮ ಘಟ್ಟಗಳು ಒಂದುಗೂಡೋ ಸ್ಥಳದ ಬಗ್ಗೆ ನೀವೇನಾದ್ರೂ ...
ಸ್ನೇಹಿತರೆ.., ಈ ಸೃಷ್ಟಿ ಅನ್ನೋದು ಕೋಟಿ ಕೋಟಿ ಸೋಜಿಗಗಳ ಆಗರ. ಇಲ್ಲಿ ಮನುಷ್ಯನ ಊಹೆಗೆ ನಿಲುಕದ ಹಲವಾರು ರಹಸ್ಯಗಳಿವೆ. ಇಲ್ಲಿರುವ ಒಂದೊಂದು ಗಿಡಮರಗಳಲ್ಲೂ ಅದರದ್ದೇ ಆದ ವಿಶೇಷತೆ ಇದೆ. ಈ ಸೋಜಿಗದ ಬೆನ್ನು ಬಿದ್ದ ನಮ್ಮ ಪೂರ್ವಜರು ಹಲವಾರು ರಹಸ್ಯಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ಉಪಯೋಗಕ್ಕೇ ಬಾರದು ಎಂದುಕೊಂಡಿದ್ದ ಸಸ್ಯಗಳಲ್ಲಿ ಜೀವಾಮೃತವನ್ನ ಪತ್ತೆ ಹಚ್ಚಿದ್ದಾರೆ ಅಂದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಇಲ್ಲೊಂದು ಗಿಡವಿದೆ, ಇದು ಅತ್ಯಂತ ವಿಷ, ಆದ್ರೆ ಇದರಲ್ಲಿ ಬಹಳಷ್ಟು ಔಷದೀಯ ಗುಣಗಳಿವೆ. ನಮ್ಮ ಕಾಡುಗಳಲ್ಲಿ, ಹೊಲಗಳಲ್ಲಿ ಈ ಸಸ್ಯ ನಮಗೆ ಹೇರಳವಾಗಿ ನೋಡೊಕೆ ಸಿಗುತ್ತೆ. ...
ನನ್ನನ್ನ ಸದಾ ಕಾಡೋ ಸ್ಥಳಗಳ ಪೈಕಿ ಇದೂ ಒಂದು. ಇದೊಂದು ದೇವಾಲಯವನ್ನ ನಾನು ಇವತ್ತಿನವರೆಗೂ ಕೇವಲ ಭಕ್ತಿಯಿಂದಾ ಕಂಡಿಲ್ಲ.. ಆದ್ರೆ ನನ್ನ ಪಾಲಿಗೆ ಇದೊಂದು ವಿಸ್ಮಯ. ನನ್ನನ್ನ ಯಾವತ್ತಿಗೂ ಕಾಡೋದು ಅದರ ಅಗಾಧತೆ, ತಂತ್ರಜ್ಞಾನ ಹಾಗೂ ಅದನ್ನ ಕಟ್ಟಿದವರ ಕಮಿಟ್ಮೆಂಟ್. ಅವತ್ತಿಗೆ ಜಗತ್ತಿನ ಸಾಕಷ್ಟು ದೇಶಗಳ ಜನಕ್ಕೆ ಬಟ್ಟೆ ಹಾಕ್ಕೊಳೋದೂ ಗೊತ್ತಿರಲಿಲ್ಲ. ಅಮೆರಿಕಾ ಅನ್ನೋ ದೇಶದ ಜನಾ ಅನಾಗರಿಕರ ಥರಾ ಬಾಳ್ತಿದ್ರು. ಬ್ರಿಟನ್ನಲ್ಲಿ ರೋಮನ್ನರ ಆಡಳಿತ ನಡೀತಿತ್ತು. ಅಲ್ಲಿದ್ದದ್ದು ಬುಡಕಟ್ಟು ಜನ. ಅವರಿಗೆ ಯಾವ ಆಧುನಿಕತೆಯ ಸ್ಪರ್ಶಾನೂ ಇರಲಿಲ್ಲಾ.. ಅಂಥಾ ದಿನಗಳಲ್ಲಿ ಭಾರತದಲ್ಲಿ ಅದರಲ್ಲೂ ...





