ಸ್ನೇಹಿತರೇ ಒಮ್ಮೆ ರಣರಂಗಕ್ಕೆ ಇಳಿದ ಮೇಲೆ ಸೋಲು, ಗೆಲುವು ಶತಸಿದ್ದ. ಯುದ್ದವೆಂದ ಮೇಲೆ ಸೋತವನು ಗೆದ್ದವನಿಗೆ ಶರಣಾಗಬೇಕು, ಸೋಲನ್ನು ಒಪ್ಪಿಕೊಳ್ಳಲೇಬೇಕು. ಹಾಗಂತ ಎಲ್ಲಾ ಯುದ್ದಗಳಲ್ಲಿ ಗೆದ್ದವನೇ ಗೆಲ್ಲಬೇಕು ಎನ್ನುವ ನಿಯಮವೇನೂ ಇಲ್ಲ. ಜಗತ್ತು ಕಂಡ ಅತ್ಯಂತ ಪರಾಕ್ರಮಿಗಳು ಕೂಡ ಒಂದಲ್ಲಾ ಒಂದು ಕಡೆ ಸೋಲನ್ನು ಅನುಭವಿಸಿರುವ ಅನೇಕ ಉದಾಹರಣೆಗಳಿವೆ. ಹಾಗೆ ಸೋಲಿನ ಕಹಿ ಅನುಭವಿಸಿದವರು ಅದಕ್ಕೆ ಪ್ರತಿಕಾರವಾಗಿ ಮರಳಿ ಗೆಲುವು ಸಾಧಿಸಿದ್ದೂ ಇದೆ. ಇನ್ನು ನೂರಾರು ಯುದ್ದಗಳನ್ನ ಮಾಡಿ ಯಾವುದರಲ್ಲೂ ಸೋಲನ್ನೇ ಅನುಭವಿಸದ ಮಹಾವೀರರು ಜಗತ್ತಿನಲ್ಲಿ ಕೆಲವೇ ಕೆಲವರು ಇದ್ದಾರೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ...
ಸ್ನೇಹಿತರೆ.., ಬಹಳಷ್ಟು ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯಕ್ಕೆ ಚೈತನ್ಯ ಕೊಡೋ ಗಿಡ, ಮರ, ಹೂವು, ಹಣ್ಣು ಸೇರಿದಂತೆ ಹಲವಾರು ವಸ್ತುಗಳನ್ನ ಉಪೇಕ್ಷೆ ಮಾಡಿ ಬಿಡುತ್ತೇವೆ. ನಮ್ಮ ಕಣ್ಣಳತೆಯಲ್ಲಿ, ನಾವು ನಡೆದಾಡುವ ಹಾದಿ ಬೀದಿಗಳಲ್ಲಿ ಅವುಗಳು ಇದ್ದರೂ ಸಹ ಕಾಲ ಕಸದಂತೆ ಮಾಡೋದು ನಮ್ಮ ದಿನಚರಿಯಾಗಿ ಬಿಟ್ಟಿದೆ. ಕನಿಷ್ಟ ಪಕ್ಷ ಅವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನಾದ್ರೂ ತೋರಿಸ್ತೀವಾ..? ಅದು ಇಲ್ಲ. ನಾವಿವತ್ತು ಹೇಳೋಕೆ ಹೊರಟಿರೋದು ಮುಟ್ಟಿದ್ರೆ ಮುನಿ, ನಾಚಿಕೆ ಮುಳ್ಳು, ಮುಚ್ಕನ್ ಮುಳ್ಳು, ಲಜ್ಜಾವತಿ, ಪತೀವ್ರತೆ, ಅಂಜಲೀ ಕಾರಿಕೆ ಅಂತೆಲ್ಲಾ ಕರೆಸಿಕೊಳ್ಳೋ ಒಂದು ಸಣ್ಣ ಸಸ್ಯದ ...
ಜಲಾಶಯಗಳು ನಾಗರಿಕ ಸಮಾಜದ ದೇಗುಲಗಳಿದ್ದಂತೆ. ಜನ ಜಾನುವಾರುಗಳ ದಾಹ ಇಂಗಿಸೋ ಜೊತೆಗೆ ಬರಡು ಭೂಮಿಯನ್ನ ಸಸ್ಯ ಸಂಪದ್ಭರಿತವನ್ನಾಗಿ ಮಾಡುವ ದಿವ್ಯ ಶಕ್ತಿ ಅದರದ್ದು. ಒಂದು ಪ್ರದೇಶದ ಆರ್ಥಿಕ, ಭೌಗೋಳಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಜಲಾಶಯಗಳು ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತವೆ. ಹೀಗಾಗಿ ಹರಿಯುವ ನೀರಿಗೆ ಒಡ್ಡು ಕಟ್ಟುವುದರಿಂದ ಹಿಡಿದು ಕೆರೆ ಕಟ್ಟೆಗಳು, ಜಲಾಶಯಗಳ ನಿರ್ಮಾಣದ ವಿಚಾರದಲ್ಲಿ ಕ್ರಾಂತಿಕಾರಿ ಕೆಲಸಗಳು ಆಗಿವೆ. ಇನ್ನು ನಮ್ಮ ಕರ್ನಾಟಕದಲ್ಲಿಯೂ ಸಹ ರಾಜ ಮಹಾರಾಜರ ಕಾಲದಿಂದದಲೂ ಮಹತ್ವದ ನೀರಾವರಿ ಯೋಜನಗೆಳು ಜಾರಿಗೆ ಬಂದಿವೆ. ಇಲ್ಲಿನ ಅತ್ಯಂತ ಶ್ರೇಷ್ಟ ವಾಸ್ತು ...
ಸ್ನೇಹಿತರೆ ಭಾರತದ ಪುಣ್ಯ ನೆಲದ ಮೇಲೆ ಹಾಗು ಭಾರತೀಯ ಭಾವನೆಗಳ ಮೇಲೆ ಪರಕೀಯರ ದಾಳಿ ನಡೆದದ್ದು, ಇಲ್ಲಿಯ ಸಂಸ್ಕೃತಿಯನ್ನ ಹಾಳು ಮಾಡುವ ಕೆಲಸ ಮಾಡಿದ್ದು ಇತಿಹಾಸದ ಪುಟ ಪುಟಗಳೂ ಹೇಳುತ್ತವೆ. ವ್ಯಾಪಾರಿಗಳ ಸೋಗಿನಲ್ಲಿ ಬಂದ ಪರಕೀಯರು ಭಾರತದ ಶ್ರೀಮಂತಿಕೆಯನ್ನ ದೋಚಿ, ಬಾರತೀಯರನ್ನೇ ಗುಲಾಮರನ್ನಾಗಿಸಿಕೊಂಡ ಬಗ್ಗೆ ಅನೇಕ ಸಾಕ್ಷ್ಯಿಗಳಿವೆ. ಅದೇ ರೀತಿ ಬ್ರಿಟೀಷರು ಭಾರತದಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಸಾಮಾಜಿಕ ಕ್ಷೇತ್ರಕ್ಕೂ ಒಂದಷ್ಟು ಕೊಡುಗೆಗಳನ್ನ ಕೊಟ್ಟಿದ್ದಾರೆ ಅನ್ನೋದನ್ನು ಕೂಡ ನಾವು ಓದಿ ತಿಳಿದುಕೊಂಡಿದ್ದೇವೆ. ಹೀಗೆ ಇತಿಹಾಸದ ಪುಟಗಳನ್ನ ತಿರುವಿ ಹಾಕುತ್ತಾ ಹೋದ್ರೆ ಭಾರತೀಯ ವಾಸ್ತು ...
ಜಗತ್ತಿನ 40% ದಷ್ಟು ಮಂದಿ ಹೃದಯಕ್ಕೆ ಸಂಬಂದಿಸಿದ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ. ಜಗತ್ತಿನ ಜನಸಂಖ‍್ಯೆಯಲ್ಲಿ ಪ್ರತಿ ಇಪ್ಪತ್ತು ಸೆಕುಂಡಿಗೆ ಒಬ್ಬರು ಹೃದಯಾಘಾತಕ್ಕೆ ಒಳಗಾಗ್ತಾ ಇದ್ದಾರೆ. ಮುಂದುವರೆದ ದೇಶ ಅಮೇರಿಕಾದಲ್ಲಿ ಸುಮಾರು 14 ಮಿಲಿಯನ್ ಹೃದ್ರೋಗಿಗಳು ಇದ್ದಾರೆ ಅಂತಾ ಅಂದಾಜಿಸಲಾಗಿದೆ. ಹೃದಯಾಘಾತ ಇದ್ದಕ್ಕಿದ್ದಂತೆ ಆಗುವ ಆಘಾತವಂತೂ ಖಂಡಿತ ಅಲ್ಲಾ, ಅದು ಬರೋದಕ್ಕೂ ಮುನ್ನ ನಮಗೆ ಹಲವಾರು ಸೂಚನೆಗಳನ್ನ ನೀಡುತ್ತೆ. ಹೃದಯಾಘಾತದ ಲಕ್ಷಣಗಳು ಕಂಡಾಗ ಅಂತಹವರು ತಮ್ಮ ಹೃದಯವನ್ನ ಕಾಪಾಡಿಕೊಳ್ಳೋಕೆ ಸಾಧ್ಯವಿದೆ. ಮನುಷ್ಯನ ದೇಹದ ಮೇಲೆ ಆಗುವ ಪ್ರತಿಯೊಂದು ಆಘಾತವೂ ಕೂಡ ಒಂದು ರೀತಿಯ ಮುನ್ನೆಚ್ಚರಿಕೆ ...
ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿತ್ತು ಅದೊಂದು ಆಘಾತಕಾರಿ ಅಂಶ. “ ಸಾವಿನ ವ್ಯಾಪಾರಿಯ ಸಾವು..!! ” ಅನ್ನೋ ಶಿರೋನಾಮೆಯ ಜೊತೆಗೆ ಪುಟಗಟ್ಟಲೆ ವರದಿ. ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದ ಆತನ ಕಣ್ಣುಗಳು ಮಂಜಾದವು. ಒಂದರೆಕ್ಷಣ ತಾನು ಗಳಿಸಿದ್ದ ಮಿಲಿಯನ್‌ಗಟ್ಟಲೆ ಆಸ್ತಿಪಾಸ್ತಿ, ಬಂದು ಬಳಗ, ಗೆಳೆಯರು ಎಲ್ಲವೂ ಆತನ ಕಣ್ಣ ಮುಂದೆ ಹಾದು ಹೋದಂತಾಯಿತು. ಆತನ ಸಹೋದರ ಮೃತಪಟ್ಟಿರುವುದನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದ ಪತ್ರಿಕೆಗಳು ಆತನೇ ಮೃತಪಟ್ಟಿದ್ದಾನೆ ಎಂಬರ್ಥದಲ್ಲಿ ಸುದ್ದಿ ಪ್ರಕಟಿಸಿದ್ದವು. ಪತ್ರಿಕೆಗಳ ತುಂಬೆಲ್ಲಾ ಆತನ ರಂಗು ರಂಗಾದ ಪೊಟೋಗಳು. ಸಹೋದರನ ಅಗಲುವಿಕೆಯಿಂದ ನೊಂದಿದ್ದ ಆತನ ಮನಸ್ಸು ಮತ್ತಷ್ಟು ವೇದನೆ ...
ಇದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳೋ ಸರಳ ವಿಧಾನ ಮನುಷ್ಯ ಎಷ್ಟೇ ಸ್ಥಿತಿವಂತನಾಗಿದ್ರೂ ಆರೋಗ್ಯ ಸರಿ ಇಲ್ಲಾ ಅಂದ್ರೆ ಯಾವುದಕ್ಕೂ ಪ್ರಯೋಜನ ಇಲ್ಲದವನಂತಾಗುತ್ತಾನೆ. ಬದುಕು ಕಟ್ಟಿಕೊಳ್ಳೋಕೆ ದುಡಿಮೆ ಎಷ್ಟು ಮುಖ್ಯವೋ ಆರೋಗ್ಯ ಕೂಡ ಅಷ್ಟೇ ಮುಖ್ಯ. ಹಾಗಂತ ಆರೋಗ್ಯ ಅನ್ನೋದು ಸುಖಾಸುಮ್ಮನೆ ಬರುವಂತಹುದ್ದಲ್ಲ. ಅದಕ್ಕಾಗಿ ಒಂದಷ್ಟು ಸಮಯಾನ ಮೀಸಲಾಗಿಡಬೇಕು, ಆ ಸಮಯ ಆರೋಗ್ಯ ವೃದ್ದಿಗೆ ಪೂರಕ ಆಗಿರಬೇಕು ಅಷ್ಟೇ. ಹಾಗಂತ ಪ್ರತಿನಿತ್ಯ ಒಂದಷ್ಟು ವ್ಯಾಯಾಮ, ಯೋಗ, ಆರೋಗ್ಯಕರ ನಿಯಮಿತ ಆಹಾರ ಇತ್ಯಾದಿ ಇತ್ಯಾದಿ ಅಂತ ಬಿಟ್ಟಿ ಸಲಹೆ ಕೊಟ್ರೆ ಈಗಿನ ಪೀಳೀಗೆಗಂತೂ ಖಂಡಿತ ಇಷ್ಟಾ ಆಗೋಲ್ಲ. ...
ಸ್ನೇಹಿತರೇ.., ಈ ಜಗತ್ತಿನಲ್ಲಿರುವ ಅತ್ಯಂತ ಪ್ರಾಚೀನ ಭಾಷೆ ಯಾವುದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತೆ, ಅದು ನಮ್ಮ ಕನ್ನಡಾನಾ..? ತಮಿಳಾ..? ಸಂಸ್ಕೃತನಾ..? ಪಾಲಿ, ಗ್ರೀಕ್, ಹೀಬ್ರೂ ಈಜಿಪ್ಷಿಯನ್ ಭಾಷೆ ಹೀಗೆ ಒಂದಾ ಎರಡಾ..?. ಈ ಭಾಷೆಗಳ ಬಗ್ಗೆ ಇರೋ ಗೊಂದಲ, ಜಗಳನಾ ಪರಿಹರಿಸೋಕೆ ಬಹುಷಃ ದೇವರಿಂದಲೂ ಸಾಧ್ಯ ಇಲ್ಲವೇನೋ. ಹೀಗಿದ್ರೂ ಕೂಡ ಜಗತ್ತಿನ ಒಂದಷ್ಟು ಪ್ರಾಚೀನ ಭಾಷೆಗಳ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಾದ ಅಗತ್ಯವಂತೂ ಖಂಡಿತ ಇದ್ದೇ ಇದೆ. ಜಗತ್ತಿನ ಇಂದಿನ ಈ ಬೆಳವಣಿಗೆಗೆ ನಾಗರಿಕತೆಯ ತೊಟ್ಟಿಲುಗಳೇ ಕಾರಣ. ಅಂತಹ ನಾಗರಿಕತೆಯ ತೊಟ್ಟಿಲುಗಳಲ್ಲಿ ...
ಗೆಳೆಯರೇ, ಭಾರತೀಯರು ಸಮುದ್ರ ವ್ಯಾಪಾರಗಳನ್ನ ಮಾಡೋದಕ್ಕೆ ಶುರ ಆಡಿದ್ದು ಯಾವಾಗ..? ಈ ಪ್ರಶ್ನೆಗೆ ಖಚಿತವಾದ ಉತ್ತರವನ್ನ ಹುಡುಕೋದು ತುಂಬಾ ಕಷ್ಟ.. ಅರಬ್ ವ್ಯಾಪಾರಿಗಳ ಮೇಲೆ ಭಾರತದ ಸಮುದ್ರ ವ್ಯಾಪಾರ ಸಂಪೂರ್ಣವಾಗಿ ಅವಲಂಬಿತವಾಗಿತ್ತು ಅನ್ನೋದನ್ನ ನಾವು ಪದೇ ಪದೇ ಓದ್ತಾ ಇರ್ತೀವಿ.. ಅರಬರು ತಂದು ಕೊಡೋ ಕುದುರೆಗಳಿಗಾಗಿ ವಿಜಯ ನಗರ ಸಾಮ್ರಾಟ ಶ್ರೀ ಕೃಷ್ಣ ದೇವರಾಯ ಕಾಯ್ತಿದ್ದ. ಆ ಕುದುರೆಗಳನ್ನ ಅವರು ಬಿಜಾಪುರ ಹಾಗೂ ಇನ್ನಿತರ ಮುಸ್ಲಿಂ ಸುಲ್ತಾನರಿಗೆ ಕೊಡ್ತಿದಾರೆ ಅನ್ನೋ ಕಾರಣಕ್ಕಾಗಿನೇ, ಮೂರೂ ಸಮುದ್ರಗಳ ಮೇಲೆ ರಾಯ ಹಿಡಿತ ಸಾಧಿಸಿದ್ದ. ಪೋರ್ಚುಗೀಸರನ್ನ ಕೃಷ್ಣದೇವರಾಯ, ಗೋವಾ ...
ಗೆಳೆಯರೇ ನಮ್ಮ ಪುರಾಣಗಳಲ್ಲಿ ದಶಾವತಾರದ ಕಲ್ಪನೆ ಇದೆಯಲ್ಲಾ, ಅದು ಭೂಮಿಯ ಉಗಮದ ಹಾಗೂ ಜೀವಗಳ ವಿಕಾಸದ ವಿವರಣೇನಾ..? ಸಾಮಾನ್ಯ ಜನರಿಗೂ ಅರ್ಥವಾಗೋ ರೀತಿಯಲ್ಲಿ, ಒಂದು ಮಹಾ ವಿಜ್ಞಾನವನ್ನ ಒಂದು ಅತ್ಯದ್ಭುತ ಇತಿಹಾಸವನ್ನ ಸರಳವಾಗಿ ಸುಲಭವಾಗಿ ಕತೆಯ ರೂಪದಲ್ಲಿ ಹೇಳೊದಕ್ಕೆ ನಮ್ಮ ಪುರಾತನ ವಿಜ್ಞಾನಿಗಳು ಅಂದ್ರೆ ರುಷಿಗಳು ದಶಾವತಾರದ ಕತೆಯನ್ನ ಹೇಳಿದ್ರಾ..? ನಿಮಗೆ ಭೂಮಿಯ ಉಗಮದ ಕತೆಯನ್ನ ಹೇಳಿದ ಮೇಲೆ ಇದನ್ನ ಹೇಳದೇ ಇದ್ರೆ ಭಾರತೀಯರ ವೈಜ್ಞಾನಿಕ ಜ್ಞಾನವನ್ನ ಮುಚ್ಚಿಟ್ಟ ಹಾಗಾಗುತ್ತೆ. ಹಾಗಾಗೀನೇ, ದಶಾವತಾರ ಹಾಗೂ ಭೂಮಿಯ ಉಗಮಕ್ಕೆ ಸಂಬಂಧಿಸಿದ ವಿವರಗಳ ನಡುವಿನ ಸಾಮ್ಯತೆಯನ್ನ ನಿಮ್ಮ ...












