ಧೂಮಪಾನ, ಮದ್ಯಪಾನದಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಸುವ ಹಲವಾರು ಜಾಹಿರಾತುಗಳನ್ನ ಹಾಗೂ ಶಾಸನ ವಿಧಿಸಿರುವ ಎಚ್ಚರಿಕೆಗಳನ್ನ ನೀವು ಸದಾ ನೋಡುತ್ತಲೇ ಇರುತ್ತೀರಿ. ಆದರೆ ಇದು ಅಂತಹ ಗಂಭೀರ ವಿಚಾರ ಅಲ್ಲಾ ಅನ್ನೋದು ಬಹಳಷ್ಟು ಮಂದಿಯ ಭಾವನೆಯಾಗಿರುತ್ತದೆ. ಪ್ರತಿನಿತ್ಯ ಕ್ಯಾನ್ಸರ್‌ ಬಗ್ಗೆ ಎಚ್ಚರಿಸುವ ಹಲವಾರು ಅಭಿಯಾನಗಳು ಜಾಗತಿಕ ಮಟ್ಟದಲ್ಲಿ ನಿರಂತರವಾಗಿದ್ದರೂ ಸಹ ಕ್ಯಾನ್ಸರ್‌ ಗೆ ಕಾರಣವಾಗುವ ಅಂಶಗಳ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇವೆಲ್ಲದರ ನಡುವೆ ಪ್ರತಿವರ್ಷ ಫೆಬ್ರವರಿ ೪ ನ್ನು ವಿಶ್ವ ಕ್ಯಾನ್ಸರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ. ಕ್ಯಾನ್ಸರ್‌ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವುದು ...

ಹುಳಿ, ಕಹಿ ಒಗರಿನ ನೆಲ್ಲಿ ಕಾಯಿನ ಚಪ್ಪರಿಸಿ ತಿನ್ನೋದು, ಆಮೇಲೆ ನೀರು ಕುಡಿದು ಬಾಯಿ ಸಿಹಿ ಮಾಡ್ಕೊಳ್ಳೋದು  ಅಂದ್ರೆ ಎಂತಾ ಮಜಾ ಅಲ್ವಾ..? ಈ ನೆಲ್ಲಿಕಾಯಿ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾ..?. ನೆಲ್ಲಿಕಾಯಿಯ ಈ ವಿಚಾರಗಳನ್ನ ನೀವು ತಿಳ್ಕೊಳ್ತಾ ಹೋದ್ರೆ ನಿಜಕ್ಕೂ ನಿಬ್ಬೆರಗಾಗಿ ಬಿಡ್ತೀರಾ. ಅಂತಹ ಒಂದಷ್ಟು ಮಾಹಿತಿನ ಇಲ್ಲಿ ನಿಮಗಾಗಿ ಕೊಡುತ್ತಿದ್ದೇವೆ. ಆರೋಗ್ಯ ವೃದ್ದಿಸುವ ಬೆಟ್ಟದ ನೆಲ್ಲಿಕಾಯಿ ಬೆಟ್ಟದ ನೆಲ್ಲಿಕಾಯಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಮಲೆನಾಡಿನ ಹಸಿರು ತಪ್ಪಲಲ್ಲಿ, ಬೆಟ್ಟ ಗುಡ್ಡಗಳಲ್ಲಿ, ಹಸನಾಗಿ ಬೆಳೆಯುವ ...

ನಿಮಗೆ ಏಕಲವ್ಯ ಗೊತ್ತಿದೆ ಅಲ್ವಾ..? ಮಹಾಭಾರತದ ಕತೆ ಗೊತ್ತಿರೋ ಪ್ರತಿಯೊಬ್ಬರಿಗೂ ಗೊತ್ತಿರೋ ಪಾತ್ರ ಏಕಲವ್ಯನದ್ದು. ಅವನು ಮಹಾಭಾರತ ಕಥಾನಕದ ಅತ್ಯಂತ ದುರಂತ ನಾಯಕ. ಅವತ್ತಿನ ಕಾಲಕ್ಕೂ ವ್ಯವಸ್ಥೆ ಅಮಾಯಕರನ್ನ ಶೋಷಣೆಗೀಡು ಮಾಡ್ತಿತ್ತು ಅನ್ನೋದಕ್ಕೆ ಸ್ಪಷ್ಟವಾದ ಉದಾಹರಣೆ ಏಕಲವ್ಯ ಅಂತಾನೇ ನಾವೆಲ್ಲಾ ಭಾವಿಸಿದೀವಿ. ಗುರು ದ್ರೋಣಾಚಾರ್ಯರ ಹತ್ರ ವಿದ್ಯೆ ಕಲಿಯೋದಕ್ಕೆ ಹೋಗುವ ಏಕಲವ್ಯ ಅಲ್ಲಿ ತಿರಸ್ಕಾರಕ್ಕೀಡಾಗ್ತಾನೆ. ವಾಪಸ್ಸು ಬಂದು ಹಟಕ್ಕೆ ಬಿದ್ದು ತಾನೇ ಬಿಲ್ವಿದ್ಯೆಯನ್ನ ಕಲೀತಾನೆ. ಹಾಗೆ ಕಲೀವಾಗ ಅವನು ಮಾಡೋ ಏಕೈಕ ತಪ್ಪು ಅಂದ್ರೆ ಅಲ್ಲಿ ದ್ರೋಣರ ಒಂದು ವಿಗ್ರಹವನ್ನ ಮಾಡಿ ತನ್ನೆದುರು ಇಟ್ಕೊಂಡಿದ್ದು.ಮುಂದೆ ...

ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಅನ್ನೋ ಗಾದೆ ಮಾತಿದೆ. ನಿಜಾನೇ.. ಕಾಮಾಲೆ ಅಂದ್ರೆ ಹಳದಿ ರೋಗ ಅಂತಾ ಅರ್ಥ. ಭಾರತೀಯ ವೈದ್ಯ ಶಾಸ್ತ್ರ ಇದನ್ನ ಪಾಂಡು ರೋಗ ಅಂತಾ ಕೂಡಾ ಕರೆಯುತ್ತೆ. ಅಥರ್ವಣ ವೇದದಲ್ಲಿ, ಚರಕ ಸಂಹಿತೆಯಲ್ಲಿ ಹಾಗೇ ಗರುಡ ಪುರಾಣ ಅನ್ನೋ ಗ್ರಂಥದಲ್ಲಿ ಕೂಡಾ ಈ ಕಾಮಾಲೆ ರೋಗದ ಬಗ್ಗೆ ಅದರ ಚಿಕಿತ್ಸೆಯ ವಿಧಾನಗಳ ಬಗ್ಗೆ ಬರೆಯಲಾಗಿದೆ ಅಂದ್ರೆ ಇದು ಸಾವಿರಾರು ವರ್ಷಗಳಿಂದಾ ಮನುಷ್ಯನನ್ನ ಕಾಡ್ತಿದ್ದ ಸಾಮಾನ್ಯ ರೋಗ ಅನ್ನೋದು ಗೊತ್ತಾಗತ್ತೆ. ಈ ಕಾಮಾಲೆ ರೋಗ, ಪಾಂಡು ರೋಗ ಅಥವಾ ಹೆಪಟೈಟಿಸ್ ಹೀಗೆಲ್ಲಾ ...

ಇದನ್ನ ಹೆಣ್ಣಿನ ದ್ವೇಷಕ್ಕೆ ತುತ್ತಾಗಿ ಪ್ರಾಣ ಕಳಕೊಂಡ ದಾಳಿಕೋರನೊಬ್ಬನ ಕತೆ ಅನ್ನಬೇಕಾ..? ಅಥವಾ, ತಮ್ಮ ದೇಶವನ್ನ ಕೊಳ್ಳೆಹೊಡೆದು ತಮ್ಮವರ ಸಾವಿಗೆ ಕಾರಣವಾದವನ ಜೀವ ತೆಗೆದ ಭಾರತೀಯ ವೀರ ನಾರಿಯರ ಕತೆ ಅನ್ನಬೇಕಾ ಗೊತ್ತಿಲ್ಲಾ.. ದುರಂತ ಅಂದ್ರೆ, ಒಂದು ಅತಿದೊಡ್ಡ ತ್ಯಾಗ ಮಾಡಿದ ಆ ಹೆಣ್ಣು ಮಕ್ಕಳ ಹೆಸರು ಕೂಡಾ ನಮ್ಮ ಇತಿಹಾಸದ ಯಾವ ಪುಟಗಳಲ್ಲೂ ನಿಮಗೆ ಸಿಗೋದಕ್ಕೆ ಸಾಧ್ಯಾನೇ ಇಲ್ಲ.. ಹಾಗಾದ್ರೆ ಯಾರು ಆ ಹೆಣ್ಣುಮಕ್ಕಳು  ಹೇಳ್ತೀನಿ ಕೇಳಿ. ಭಾರತದ ಮೇಲೆ ಮೊಟ್ಟಮೊದಲ ಬಾರಿಗೆ ದಂಡೆತ್ತಿ ಬಂದ  ಮುಸ್ಲಿಂ  ದಾಳಿಕೋರ ಯಾರು..? ಈ ಪ್ರಶ್ನೆಯನ್ನ ಯಾರಿಗಾದ್ರೂ ...

ನನ್ನನ್ನ ಸದಾ ಕಾಡೋ ಸ್ಥಳಗಳ ಪೈಕಿ ಇದೂ ಒಂದು. ಇದೊಂದು ದೇವಾಲಯವನ್ನ ನಾನು ಇವತ್ತಿನವರೆಗೂ ಕೇವಲ ಭಕ್ತಿಯಿಂದಾ ಕಂಡಿಲ್ಲ.. ಆದ್ರೆ ನನ್ನ ಪಾಲಿಗೆ ಇದೊಂದು ವಿಸ್ಮಯ. ನನ್ನನ್ನ ಯಾವತ್ತಿಗೂ ಕಾಡೋದು ಅದರ ಅಗಾಧತೆ, ತಂತ್ರಜ್ಞಾನ ಹಾಗೂ ಅದನ್ನ ಕಟ್ಟಿದವರ ಕಮಿಟ್ಮೆಂಟ್. ಅವತ್ತಿಗೆ ಜಗತ್ತಿನ ಸಾಕಷ್ಟು ದೇಶಗಳ ಜನಕ್ಕೆ ಬಟ್ಟೆ ಹಾಕ್ಕೊಳೋದೂ ಗೊತ್ತಿರಲಿಲ್ಲ. ಅಮೆರಿಕಾ ಅನ್ನೋ ದೇಶದ ಜನಾ ಅನಾಗರಿಕರ ಥರಾ ಬಾಳ್ತಿದ್ರು. ಬ್ರಿಟನ್ನಲ್ಲಿ ರೋಮನ್ನರ ಆಡಳಿತ ನಡೀತಿತ್ತು. ಅಲ್ಲಿದ್ದದ್ದು ಬುಡಕಟ್ಟು ಜನ. ಅವರಿಗೆ ಯಾವ ಆಧುನಿಕತೆಯ ಸ್ಪರ್ಶಾನೂ ಇರಲಿಲ್ಲಾ.. ಅಂಥಾ ದಿನಗಳಲ್ಲಿ ಭಾರತದಲ್ಲಿ ಅದರಲ್ಲೂ ...

ಸ್ನೇಹಿತರೇ.., ನಮ್ಮ ಜೀವನ ಶೈಲಿನೇ ಹಾಗೆ. ಒಂದೊಂದು ಸಾರಿ ಸಣ್ಣಪುಟ್ಟ ವಿಚಾರಗಳನ್ನೂ ದೊಡ್ಡದಾಗಿ ತಗೋಂತೀವಿ. ನಮ್ಮನ್ನ ನಾವು ಸಂರಕ್ಷಣೆ ಮಾಡ್ಕೊಳ್ಳೋಕೆ ನಮ್ಮ ಸುತ್ತಮುತ್ತ ಬೇಕಾದಷ್ಟು ಅಂಶಗಳು ಇರುತ್ತವೆ. ಆದ್ರೆ ನಮಗೆ ಮಾತ್ರ ಅದು ಗಂಭೀರ ಅಂತ ಅನ್ಸೋದಿಲ್ಲ. ಈಗ ಹೇಗಾಗಿದೆ ಅಂದ್ರೆ ಶೀತ, ಜ್ವರ, ನೆಗಡಿ, ಚರ್ಮದ ಸಣ್ಣಪುಟ್ಟ ಸಮಸ್ಯೆಯಾದ್ರೂ ಆಸ್ಪತ್ರೆಗಳಿಗೆ ದುಂಬಾಲು ಬೀಳೋದು ನಮಗೆ ರೂಢಿಯಾಗಿ ಬಿಟ್ಟಿದೆ. ಅಲ್ಲಿ ಅಪಾಯಿಂಟ್‌ಮೆಂಟ್‌ ಹೆಸರಲ್ಲಿ ತಾಸುಗಟ್ಟಲೆ ಕಾದು ಟ್ರೀಟ್‌ಮೆಂಟ್‌ ತಗೊಂಡ್ರೇನೇ ಸಮಾಧಾನ.    ಆರೋಗ್ಯದ ಸಮಸ್ಯೆಗೆ ಈ ನಿಸರ್ಗದಲ್ಲೇ ಬಹಳಷ್ಟು ಪರಿಹಾರ ಮಾರ್ಗೋಪಯಗಳು ಇವೆ. ಇನ್ನು ...

ಸ್ನೇಹಿತರೇ. ಪ್ರತೀ ವರ್ಷದ ಹಾಗೇ ಈ ವರ್ಷದ ಫೆಬ್ರುವರಿ 15 ರಂದು  ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನ ಆಚರಿಸಲಾಗ್ತಾ ಇದೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸೋದು, ಕ್ಯಾನ್ಸರ್‌ನ ಮೊದಲ ಹಂತದ ಪತ್ತೆ,  ರೋಗನಿರ್ಣಯ, ಕಡಿಮೆ ಮತ್ತು ಗುಣಮಟ್ಟದ ಔಷಧಿಗಳ ಲಭ್ಯತೆ, ಉತ್ತಮ ಚಿಕಿತ್ಸೆ, ಕ್ಯಾನ್ಸರ್ನಿಂದ ಬಳಲ್ತಾ ಇರೋ ಮಕ್ಕಳಿಗೆ ಉತ್ತಮ ಆರೈಕೆ, ಸ್ವಚ್ಛತೆ, ರೇಡಿಯೊಥೆರಪಿ, ಕೋಬಾಲ್ಟ್-60 ನಂತಹ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡೋದು ಇದರ ಮುಖ್ಯ ಉದ್ದೇಶ. ಇನ್ನು  ಕ್ಯಾನ್ಸರ್‌ ಅನ್ನೋ ಪದ ಕೇಳಿದ ತಕ್ಷಣ  ಒಂದು ಸಾರಿ ಆತಂಕ, ಭಯ ಶುರುವಾಗುತ್ತೆ. ...

ಸ್ನೇಹಿತರೇ ಮನುಷ್ಯ ಲವಲವಿಕೆಯಿಂದ ಇರಬೇಕು ಅಂದ್ರೆ ಆತನ ದಿನಚರಿಯಲ್ಲಿ ಆಹಾರ ಅನ್ನೋದು ಇರಲೇಬೇಕು. ಆಹಾರ ಮನುಷ್ಯನ ದೇಹಕ್ಕೆ ಇಂಧನ ಇದ್ದ ಹಾಗೆ. ಆದ್ರೆ ಆಹಾರ ಸೇವನೆ ಮಾಡೋಕೂ ಒಂದು ಇತಿ ಮಿತಿ ಅನ್ನೋದು ಇದೆ. ಅತಿಯಾದ್ರೆ ಅಮೃತನೂ ವಿಷ ಅಂತಾರಲ್ಲಾ.., ಆಹಾರನೂ ಕೂಡ ಅತಿಯಾದ್ರೆ ಆರೋಗ್ಯದ ಮಿತಿ ತಪ್ಪಿ ಹೋಗುತ್ತೆ. ಇನ್ನು ಊಟ ಮಾಡೋಕೂ ಒಂದು ಕ್ರಮ ಇದೆ. ಈಗಿನ ಮಾಡರ್ನ್‌ ಲೈಪ್‌ನಲ್ಲಿ ನಾವು ಅದರ ಬಗ್ಗೆ ಜಾಸ್ತಿ ಗಮನ ಕೊಡೋಲ್ಲ ಅಷ್ಟೇ. ಇಷ್ಡ ಬಂದಾಗ ಇಷ್ಟ ಬಂದಿದ್ದನ್ನೆಲ್ಲಾ ತಿನ್ನೋದು ಈಗಿನವರ ಅಭ್ಯಾಸ. ಅದ್ರಲ್ಲೂ ...

ಸ್ನೇಹಿತರೇ  ಮಾನವ ದೇಹದ ಅಂಗರಚನೆ ಈ ಸೃಷ್ಟಿಗೆ ನಿಲುಕದ ಮಹಾ ರಹಸ್ಯ. ದೇಹದ ಒಂದೊಂದು ಭಾಗವೂ ಕೂಡ ನಿಜಕ್ಕೂ ಸೃಷ್ಟಿ ವೈಚಿತ್ರ್ಯ. ತಾಯಿಯ ಗರ್ಭದ ಜೊತೆ ಸಂಪರ್ಕ ಬೆಸೆದುಕೊಳ್ಳೋ ಹೊಕ್ಕಳ ಬಳ್ಳಿ ಹಲವು ಸೋಜಿಗಗಳನ್ನ ತೆರೆದಿಡುತ್ತೆ. ಪೌರಾಣಿಕ ಕಥೆಗಳಲ್ಲೂ ಕೂಡ ಹೊಕ್ಕಳಿನ ವಿಚಾರ ತನ್ನದೇ ಆದ ವಿಶಿಷ್ಟ ಸ್ಥಾನ ಪಡ್ಕೊಂಡಿದೆ. ಇನ್ನು ಲಲನೆಯರ ಚಿತ್ರವಿಚಿತ್ರ ಭಂಗಿಗಳ ಚಿತ್ರಗಳಲ್ಲಿ ಸಿನೆಮಾಗಳಲ್ಲಿ ಈ ಹೊಕ್ಕಳಿನ ವಿಚಾರ ಪಡ್ಡೇ ಹುಡುಗರ ನಿದ್ದೆ ಕೆಡಿಸುತ್ತೆ ಅಂದ್ರೆ ಖಂಡಿತ ತಪ್ಪಾಗೋಲ್ಲ. ಆದ್ರೆ ನಮ್ಮ ಪರಂಪರೆಯಲ್ಲಿ  ಹೊಕ್ಕಳು ಪ್ರದರ್ಶನ ಮಾಡೋ ಅಂಗವಂತೂ ಖಂಡಿತ ...