ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳ ಪೈಕಿ ಒಂದು. ಇಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಇನ್ನು ರಂಗೇರುತ್ತಾ ಇದೆ. ಅದಕ್ಕೆ ಕಾರಣವಾಗಿರುವುದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಸ್ಪರ್ಧೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಸಿಎಂ ಎದುರು ಕಾಂಗ್ರೆಸ್ ಪಕ್ಷ ಸ್ಟಾರ್ ಚಂದ್ರು ಅನ್ನೋ ಉದ್ಯಮಿಯನ್ನ ಕಣಕ್ಕಿಳಿಸಿದೆ. ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತ ಪಕ್ಷೇತರರಾಗಿ ಕಣಕ್ಕಿಳಿದರೆ ಹೆಚ್.ಡಿ.ಕೆ. ಗೆಲುವು ಕಷ್ಟವಾಗಬಹುದು ಅನ್ನೋ ಮಾತುಗಳು ಕೇಳಿಬರುತ್ತಾ ಇತ್ತು. ಆದ್ರೆ ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿದು, ಬಿಜೆಪಿಗೆ ಬೆಂಬಲವನ್ನು ...
ತುಮಕೂರು ಲೋಕಸಭಾ ಕ್ಷೇತ್ರ ಸದಾ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಗಮನ ಸೆಳೆಯುತ್ತೆ. ಇದು ಚಿಕ್ಕನಾಯಕನ ಹಳ್ಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ನಗರ ಹಾಗೂ ಗ್ರಾಮಾಂತರ ಕೊರಟಗೆರೆ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದೆ ಈ ಬಾರಿ ಇಲ್ಲಿ ಬಿಜೆಪಿಯಿಂದ ಮಾಜಿ ಸಚಿವ ವಿ ಸೋಮಣ್ಣ ಕಣದಲ್ಲಿದ್ರೆ, ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡರನ್ನ ಕಣಕ್ಕಿಳಿಸಿದೆ. ಹಾಗೆ ನೋಡಿದ್ರೆ ಕ್ಷೇತ್ರದಲ್ಲಿ ಸೋಮಣ್ಣ ಮೇಲ್ನೊಟಕ್ಕೆ ಗೆಲ್ಲುವ ಕುದುರೆ ಅನ್ನಿಸಿಕೊಳ್ತಾರೆ. ರಾಜಕಾರಣದಲ್ಲಿ ಬಹಳಷ್ಟು ಪಳಗಿರುವ ಸೋಮಣ್ಣಗೆ ಸ್ಪಪಕ್ಷೀಯರೇ ಕಾಟ ಕೊಡದೇ ಇದ್ರೆ ಅವ್ರ ಗೆಲುವು ...
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಧ್ಯದ ಮಟ್ಟಿಗೆ ಬಿಜೆಪಿ ಕೈಯಲ್ಲಿ ಇದೆಯಾದ್ರೂ ಕಾಂಗ್ರೆಸ್ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದೆ. ಎಸ್ಸಿ ಮೀಸಲು ಕ್ಷೇತ್ರವಾಗಿರೋ ಈ ಲೋಕಸಭಾ ಕ್ಷೇತ್ರ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಸಿರಾ ಹಾಗೂ ಪಾವಗಡ ಅನ್ನೋ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದ್ದು ಈ ಪೈಕಿ 7ರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ರೆ ಹೊಳಲ್ಕೆರೆ ಒಂದು ಮಾತ್ರ ಬಿಜೆಪಿ ಹಿಡಿತದಲ್ಲಿದೆ. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಇಲ್ಲಿನ ಸಂಸದರಾಗಿದ್ರು, ಆದ್ರೆ ಬಿಜೆಪಿ ಹೈ ಕಮಾಂಡ್ ಈ ಬಾರಿ ನಾರಾಯಣ ಸ್ವಾಮಿ ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶವನ್ನ ನೀಡಿದ ಕ್ಷೇತ್ರಗಳ ಪೈಕಿನ ಚಾಮರಾಜ ನಗರ ಲೋಕಸಭಾ ಕ್ಷೇತ್ರ ಕೂಡಾ ಒಂದು. ಇಲ್ಲಿ ಈ ಬಾರಿ ಬಿಜೆಪಿಯಿಂದ ಮಾಜಿ ಶಾಸಕ ಬಾಲರಾಜ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಳೆದು ತೂಗಿ ಸಚಿವ ಹೆಚ್ಸಿ ಮಹದೇವಪ್ಪ ಮಗ ಸುನೀಲ್ ಬೋಸ್ಗೆ ಟಿಕೆಟ್ ಕೊಟ್ಟಿದೆ. ಇಬ್ಬರು ಕೂಡಾ ಇಲ್ಲಿ ಗೆಲ್ಲಬೇಕು ಅಂತ ಹೊರಟಿದ್ದಾರೆ. ಇಲ್ಲಿ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವ್ರ ಕುಟುಂಬಕ್ಕೆ ಟಿಕೆಟ್ ಸಿಗಬಹುದು ಅಂತಾ ಹೇಳಲಾಗ್ತಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವ್ರಿಗೆ ಟಿಕೆಟ್ ಮಿಸ್ ಆಗಿದ್ದು ಕೊಳ್ಳೇಗಾಲದ ಮಾಜಿ ಶಾಸಕ, ...
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತ್ಯಂತ ಅಚ್ಚರಿಯ ಫಲಿತಾಂಶವನ್ನ ನೀಡಿದ್ದು ಕೋಲಾರ ಲೋಕಸಭಾ ಕ್ಷೇತ್ರ. ಕಾಂಗ್ರೆಸ್ನ ಭದ್ರ ಕೋಟೆ ಅನ್ನಿಸಿಕೊಂಡಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಮತದಾರರು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್ ಮುನಿಸ್ವಾಮಿ ಗೆಲುವನ್ನ ಸಾಧಿಸಿದ್ರು. ಅದು ಕೂಡಾ ಕಾಂಗ್ರೆಸ್ ನ ಘಟಾನುಘಟಿ ನಾಯಕ ಅನ್ನಿಸಿಕೊಂಡಿದ್ದ ಕೆ ಎಚ್ ಮುನಿಯಪ್ಪ ಅವರ ವಿರುದ್ಧ ಸುಮಾರು 2 ಲಕ್ಷಕ್ಕೂ ಅಧಿಕ ಅಂತರದಲ್ಲಿ ಜಯಭೇರಿಯನ್ನ ಸಾಧಿಸಿದ್ರು. ಇನ್ನು ಇದು ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಈ ಬಾರಿ ಕಾಂಗ್ರೆಸ್ನಿಂದ ಗೌತಮ್ ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ...
29 ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಕುತೂಹಲವನ್ನ ಹೆಚ್ಚಿಸಿರುವ ಕರ್ನಾಟಕದ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರ. ಸಧ್ಯಕ್ಕೆ ಬಿಜೆಪಿ ಹಿಡಿತದಲ್ಲಿರೋ ಈ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಎನ್ ಬಚ್ಚೇಗೌಡ ಅದಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನ ಘೋಷಿಸಿದ್ದರಿಂದ ಬಿಜೆಪಿ ಹೊಸ ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ. ಮಾಜಿ ಸಚಿವ ಕೆ ಸುಧಾಕರ್ ಇಲ್ಲಿ ಬಿಜೆಪಿ ಹುರಿಯಾಳಾಗಿ ಕಣದಲ್ಲಿದ್ರೆ ಕಾಂಗ್ರೆಸ್ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಇಬ್ಬರೂ ಪ್ರಭಾವಿ ನಾಯಕರಾಗಿರೋ ಕಾರಣದಿಂದಾಗಿ ಕದನಕಣ ಗಮನಸೆಳಿತಿದೆ. ಇದು ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಯಲಹಂಕ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳನ್ನ ...
ಈ ಬಾರಿಯ ಲೋಕಸಭಾ ಚುನಾವಣೆ ಹತ್ತು ಹಲವು ಕಾರಣಕ್ಕೆ ಕುತೂಹಲವನ್ನು ಹೆಚ್ಚಿಸುತ್ತಿದೆ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕನಸು! ಈ ಬಾರಿ ಏನಾದರೂ ಮಾಡಿ 370 ಸೀಟುಗಳನ್ನು ಮುಟ್ಟಬೇಕು ಅಂತ ಬಿಜೆಪಿ ಇದ್ರೆ, ಶತಾಯಗತಾಯ ಅವ್ರನ್ನ ಅಧಿಕಾರದಿಂದ ಕೆಳಗಿಳಿಸಲೇ ಬೇಕು ಅಂತ ಕಾಂಗ್ರೆಸ್ ಕನಸು ಕಾಣ್ತಾ ಇದೆ. ಹೀಗಾಗಿನೇ ಈ ಬಾರಿ ಎರಡು ಪಕ್ಷಗಳು ಹೆಚ್ಚಿನ ಶ್ರಮವಹಿಸಬೇಕಾಗಿ ಬಂದಿದೆ. ಅದರಲ್ಲೂ ಬಿಜೆಪಿಗೆ ಉತ್ತರ ಭಾರತದಲ್ಲಿನ ಸೀಟ್ಗಳನ್ನ ಉಳಿಸಿಕೊಂಡು, ದಕ್ಷಿಣ ಭಾರತವನ್ನ ಗೆಲ್ಲುವ ಚಾಲೆಂಜ್ ಇದೆ. ಆಂತರಿಕ ಭಿನ್ನಮತ, ಹಿರಿಯ ನಾಯಕರ ಮುನಿಸು ಇವೆಲ್ಲವನ್ನ ಮೀರಿ ...
ಕಳೆದ ಎಂಟು ಲೋಕಸಭಾ ಚುನಾವಣೆಗಳಿಂದ ಕಾಂಗ್ರೆಸ್ ಪಾಲಿಗೆ ಎಟುಕದ ನಕ್ಷತ್ರವಾಗಿ ಉಳಿದಿರುವ ಲೋಕಸಭಾ ಕ್ಷೇತ್ರ ದಕ್ಷಿಣ ಕನ್ನಡ. ಈ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನ 2009ಕ್ಕೂ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರ ಅಂತ ಗುರುತಿಸಲಾಗುತ್ತಿತ್ತು. ರಾಮಜನ್ಮಭೂಮಿ ವಿವಾದ ಶುರುವಾದ ನಂತ್ರ ಅಯೋಧ್ಯೆಯಲ್ಲಿನ ಕಳಂಕಿತ ಕಟ್ಟಡ ಧರೆಗುರುಳಿದ ನಂತ್ರ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರಸ್ ಪಕ್ಷಕ್ಕೆ ಜಯವೇ ಸಿಕ್ಕಿಲ್ಲ.1991ರಿಂದ ಇಲ್ಲಿವರೆಗೂ ನಡೆದಿರುವ ಎಂಟು ಚುನಾವಣೆಳಲ್ಲಿ ಕಾಂಗ್ರಸ್ ಮಖಾಡೆ ಮಲಗಿದೆ. ಅಂದಿನಿಂದ ಈ ಕ್ಷೇತ್ರ ಬಿಜೆಪಿಯ ಭದ್ರ ಕೊಟೆ ಅನ್ನಿಸಿಕೊಂಡಿದೆ. 2009 ಲೋಕಸಭಾ ಚುನಾವಣೆಯಿಂದ ಇಲ್ಲಿ ಸತತ ಮೂರು ...
ಕರ್ನಾಟಕದಲ್ಲಿ ಜೆಡಿಎಸ್ನ ಭದ್ರಕೋಟೆ ಅನ್ನಿಸಿಕೊಂಡಿರುವ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರ. ಇದು ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಏಕೈಕ ಕ್ಷೇತ್ರವೂ ಹೌದು. ಪ್ರಜ್ವಲ್ ರೇವಣ್ಣ ಇಲ್ಲಿನ ಹಾಲಿ ಸಂಸದರಾಗಿದ್ದು, ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇವರಿಗೆ ಸರಿಸಮಾನವಾದ ಪೈಪೋಟಿ ನೋಡೋದಕ್ಕೆ ಕಾಂಗ್ರೆಸ್ ಕೂಡಾ ಈ ಬಾರಿ ಯುವ ಅಭ್ಯರ್ಥಿ, ಮಾಜಿ ಸಂಸದ, ದಿವಂಗತ ಜಿ ಪುಟ್ಟಸ್ವಾಮಿ ಗೌಡ್ರ ಮೊಮ್ಮಗ ಶ್ರೇಯಸ್ ಪಟೇಲ್ ಗೌಡ್ರನ್ನ ಕಣಕ್ಕಿಳಿಸಿದೆ. ಶ್ರೇಯಸ್ ಪಟೇಲ್ ಲೋಕಸಭಾ ಚುನಾವಣೆಯಲ್ಲಿ ಇದೇಮೊದಲ ಬಾರಿ ಸ್ಪರ್ಧಿಸ್ತಾ ಇರೋದಾದ್ರೂ ರಾಜಕೀಯ ...
ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಗಮನ ಸೆಳೆದಿರುವ ಮತ್ತೊಂದು ಲೋಕಸಭಾ ಕ್ಷೇತ್ರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಈ ಹಿಂದೆ ಈ ಉಡುಪಿ ಹಾಗೂ ಚಿಕ್ಕ ಮಗಳೂರು ಎರಡು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದವು. ಆದರೆ 2009ರ ನಂತರ ಈ ಎರಡು ಜಿಲ್ಲೆಗಳ ಕ್ಷೇತ್ರಗಳನ್ನ ಸೇರಿಸಿ ಒಂದು ಲೋಕಸಭಾ ಕ್ಷೇತ್ರವನ್ನ ರಚನೆ ಮಾಡಲಾಗಿದೆ. ಈ ಬಾರಿ ಹಲವು ರಾಜಕೀಯ ಬೆಳವಣಿಗೆಗಳಿಗೆ, ಬದಲಾವಣೆಗಳಿಗೆ ಸಾಕ್ಷಿಯಾದ ಲೋಕಸಭಾ ಕ್ಷೇತ್ರಗಳ ಪೈಕಿ ಇದೂ ಕೂಡಾ ಒಂದು. ಯಾಕಂದರೆ ಈ ಬಾರಿ ಇಲ್ಲಿ ಬಿಜೆಪಿ ಟಿಕೆಟ್ನ ಹಾಲಿ ಸಂಸದೆ ...












